ಮಾಯಸಂದ್ರ
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಒಂದು ಪಟ್ಟಣ ಮತ್ತು ಹೋಬಳಿ ಆಡಳಿತ ಕೇಂದ್ರ. ತುರುವೇಕೆರೆಗೆ 16 ಕಿಮೀ. ದೂರದಲ್ಲಿದೆ. ಹೆಬ್ಬಾರ್ ವೈಷ್ಣವರು ನೆಲೆಸಿದ ಪಂಚಗ್ರಾಮಗಳಲ್ಲೊಂದು. ಮಾಯಸಂದ್ರ ಕೆರೆದಂಡೆಯ ಮಧ್ಯದಲ್ಲಿ ಮಾಯಮ್ಮ ದೇವತೆಯ ದೇವಾಲಯವೂ ಊರಿನಲ್ಲಿ ಶಕ್ತಿದೇವತೆ ಕೊಲ್ಲಾಪುರದಮ್ಮನ ದೇವಾಲಯವೂ ಇವೆ. ಊರಿಗೆ 3 ಕಿಮೀ ದೂರದಲ್ಲಿ ನೆಲ್ಲಿಗೆರೆ ಮಾರ್ಗದಲ್ಲಿರುವ ಒಂದು ಗುಡ್ಡದ ಮೇಲೆ ಮಹದೇಶ್ವರ ದೇವಾಲಯವಿದೆ. ಪ್ರತಿವರ್ಷ ನಡೆಯುವ ಇಲ್ಲಿಯ ಜಾತ್ರೆಯಲ್ಲಿ ಜಾನುವಾರುಗಳ ಸಂತೆ ಸೇರುವುದು. ಇಲ್ಲಿಂದ ಸುಮಾರು 4 ಕಿಮೀ ದೂರದಲ್ಲಿರುವ ರಾಮನಗರದಲ್ಲಿ ಹೊಯ್ಸಳರ ಕಾಲದ ವರದರಾಜ ದೇವಾಲಯವಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ